ಅಭಿಪ್ರಾಯ / ಸಲಹೆಗಳು

ಉಚಿತ ಬೈಸಿಕಲ್ ವಿತರಣೆ

  • ಉಚಿತ ಬೈಸಿಕಲ್ ಸೌಲಭ್ಯ ನೀಡುವ ಯೋಜನೆಯನ್ನು 2006-07ನೇ ಸಾಲಿನಲ್ಲಿ ಜಾರಿಗೊಳಿಸಲಾಯಿತು. ಆರಂಭದ ವರ್ಷದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲಾಗಿತ್ತಾದರೂ ಕ್ರಮೇಣ (ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲೆಗಳು, ವಿದ್ಯಾರ್ಥಿ ನಿಲಯ ಹಾಗೂ ಬಸ್ ಪಾಸ್ ಸೌಲಭ್ಯ ಹೊಂದಿರುವ ಮಕ್ಕಳನ್ನು ಹೊರತುಪಡಿಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 8ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಮಕ್ಕಳಲ್ಲಿ ಧೈರ್ಯ, ಆತ್ಮ ವಿಶ್ವಾಸ ಮೂಡಿಸುವುದಲ್ಲದೇ ತಡವಾಗಿ ಶಾಲೆಗೆ ಆಗಮಿಸುವುದು, ಗೈರು ಹಾಜರಾಗುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • 2017-18 ನೇ ಸಾಲಿನಲ್ಲಿ 8ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 2,47,955 ಹೆಣ್ಣು ಮಕ್ಕಳಿಗೆ ಮತ್ತು 2,57,941 ಗಂಡು ಮಕ್ಕಳಿಗೆ ಒಟ್ಟು 5,05,896 ಬೈಸಿಕಲ್‍ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ರೂ.172.00 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಬೈಸಿಕಲ್‍ಗಳ ಜೊತೆಗೆ ಪ್ರತೀ ಶಾಲೆಗೆ ಒಂದು ಸೆಟ್ ಟೂಲ್ ಕಿಟ್ ಹಾಗೂ ಪ್ರತಿ ಬೈಸಿಕಲ್‍ಗೆ ಐದು ವರ್ಷಗಳ ವಾರಂಟಿ ಕಾರ್ಡ್ ನೀಡಿದೆ. ಸೈಕಲ್ ವಿತರಿಸಿದÀ ಆರು ತಿಂಗಳ ಒಳಗೆ ಕ್ಲಸ್ಟರ್ ಹಂತದಲ್ಲಿ ಬೈಸಿಕಲ್ ಸರ್ವಿಸಿಂಗ್ ಕ್ಯಾಂಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇತ್ತೀಚಿನ ನವೀಕರಣ​ : 28-06-2019 12:21 PM ಅನುಮೋದಕರು: approver1



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ